SANDESHA
Ugadi
Anivaasi.com is the website of Kannada Sahitya mattu Samskruthika Vichara Vedike (KSSVV), an arms-length literary organisation of Kannada Balaga UK. Anivaasi is a self hosted website maintained and updated by KBUK members with literary interest and background. Click the button to open an external link to Anivaasi.com.
Sandesha team
visits British library
The editors of Sandesha – Dr. Uma Venkatesh, Dr. Rajaram Cavale and Mr. Ramamurthy were invited to visit British Library in London on the 25th August 2011. They were guests of Mrs Nalini Persad, Curator of South Asian Languages. The library has hundreds of kannada books, manuscripts and other historical documents relating to Karnataka collected over many years.
Many of our scholars like Dr Havanoor, Prof Sreenivasa Murthy and Mr Belliappa have made use of facilities here for their research. The Library has kindly donated books to Kannada Balaga to start it’s own library.

Kannada Kali
Kannada Balaga members with children of school going age have shown a great interest in teaching their children kannada language, especially spoken and colloquial kannada.
In response to this enthusiasm, Kannada Balaga U.K. has planned kannada teaching classes called “Kannada Kali”. These classes and the teaching methods are based on those of Kannada Kali classes that have been successfully run in the USA for the past 10 years. One of the teachers there proudly said that some of these young children in America are on par with children in Karnataka!
Many young members especially second generation of kannadigas and kannadathis have come forward in taking active part in starting kannada classes to their young children here in the United Kingdom. The classes are based as a self help group of Kannada Balaga members. A group of 5 to 10 members with their young children meet at a convenient place weekly or fortnightly and initially run spoken kannada classes. Parents are also briefed on setting up Kannada Kali classes for the future.
If you are interested in running a Kannada Kali class near your home, please let us know. We could set up a meeting with yourself to discuss various aspects of setting up kannada classes near you. The project is run on a voluntary basis and the cost is kept to a minimum. Interested people and parents act as volunteer teachers. Parents are encouraged to search for places which are available free or with minimal fees. Classes are currently being run successfully across the country in local community centres, school rooms and rooms in churches and temples. Please contact us using the Contact Us page link if you are interested in Kannada Kali.
“ಕನ್ನಡ ಕಲಿ” ಕಾರ್ಯಕ್ರಮವನ್ನು ನಿಮ್ಮ ನಿಮ್ಮ ಊರಿನಲ್ಲಿ ಪ್ರಾರಂಭಿಸಿ ಮತ್ತು
ಕನ್ನಡ ಭಾಷೆಯನ್ನು ನಿಮ್ಮ ಮುಂದಿನ ಪೀಳಿಗೆಗೆ ಮುಂದುವರೆಸಲು ಸಹಕರಿಸಿ.
ಕನ್ನದ ಬಳಗ ಯು.ಕೆ.ಯ ಯುವಸದಸ್ಕರು ತಮ್ಮ ತಮ್ಮ ಮಕ್ಕಳಿಗೆ ಕನ್ನಡ ಭಾಷೆಯ ಓದು
ಮತ್ತು ಬರಹವನ್ನು ಕಲಿಸಲು ಬಹಳ ಹುರುಪಿನಿಂದ ಮುಂದೆ ಬಂದಿದ್ದಾರೆ. ಇವರ ಈ
ಉತ್ಸಾಹಕ್ಕೆ ಬೆಂಬಲವಾಗಿ ಕನ್ನಡ ಬಳಗ ಯು.ಕೆ. ಬ್ರಿಟಿಷ್ ಸಮುದಾಯ ದ್ವೀಪಗಳಲ್ಲಿ
“ಕನ್ನಡ ಕಲಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ನಮ್ಮ ಸಹೋದರ ಸಂಸ್ಥೆ
ಅಮೇರಿಕಾದ ಅಕ್ಕ ಬಳಗವು ತನ್ನ ಮೂಲಕರ್ತ `ಕನ್ನಡ ಕಲಿ” ಈ ಕಾರ್ಯಕ್ರಮವನ್ನು
ಕಳೆದ ೧೦ ವರ್ಷಗಳಿಂದ ಬಹಳ ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಅಲ್ಲಿನ ಹಿರಿಯ
ಕನ್ನಡ ಕಾರ್ಯಕರ್ತರೊಬ್ಬರ ಅಭಿಪ್ರಾಯದಲ್ಲಿ, ಅಮೇರಿಕಾದಲ್ಲಿ ಈ ಕಾರ್ಯಕ್ರಮದ
ನೆರವಿನಿಂದ ಕನ್ನಡ ಕಲಿತ ಮಕ್ಕಳು, ಕರ್ನಾಟಕದಲ್ಲಿನ ಅದೇ ವಯಸ್ಸಿನವರಿಗಿಂತಾ
ಉತ್ತಮ ಮಟ್ಟ ಗಳಿಸಿದ್ದಾರೆ ಎಂದಿದ್ದಾರೆ.
ಕನ್ನಡ ಬಳಗದ ಯುವ ಸದಸ್ಕರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ
ಮಕ್ಕಳನ್ನು ಅದೇ ಮಾರ್ಗದಲ್ಲಿ ನಡೆಸಲು ಮುಂದೆ ಬಂದಿದ್ದಾರೆ. ಈ ಕಾರ್ಯಕ್ರಮವನ್ನು
ಸ್ವಯಂಸೇವಾ ಆಧಾರದದ ಮೇಲೆ ಪ್ರಾರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ
ಕಾರ್ಯಕ್ರಮದಲ್ಲಿ ಭಾಗವಹಿಸುವ ತಂದೆತಾಯಿಯರು, ಪ್ರಾರಂಭದಲ್ಲಿ ೫ ರಿಂದ ೧೦
ಮಕ್ಕಳ ಗುಂಪಿನಲ್ಲಿ ಪ್ರತಿವಾರ ಅಥವ ೨ ವಾರಗಳಿಗೊಮ್ಮೆ ನಿಗದಿ ಪಡಿಸಿದ ಜಾಗಗಳಲ್ಲಿ
ಸಂಧಿಸಿ ಕನ್ನಡ ಆಡುಭಾಷೆಯ ತರಗತಿಗಳನ್ನು ಶುರುಮಾಡುವುದು. ಈ ಕಾರ್ಯಕ್ರಮದಲ್ಲಿ
ಸ್ವಯಂಸೇವಕರಾಗಿ ಭಾಗವಹಿಸುವ ತಂದೆತಾಯಿಯರಿಗೆ, ಈ ತರಗತಿಗಳನ್ನು
ಯಶಸ್ವಿಯಾಗಿ ನಡೆಸುವ ಸಲಹೆ ಮತ್ತು ತರಬೇತಿ ನೀಡಲಾಗುವುದು.
ಇದರಲ್ಲಿ ಆಸಕ್ತಿಯುಳ್ಳವರು ಶೀಘ್ರವಾಗಿ ಕನ್ನಡ ಬಳಗದ ಕಾರ್ಯಕರ್ತರನ್ನು ಸಂಪರ್ಕಿಸಿ
ಈ ಕಾರ್ಯಕ್ರಮಕ್ಕೆ ಸಂಭಂಧಪಟ್ಟ ವಿವಿಧ ವಿಷಯಗಳ ಬಗ್ಗೆ, ಭೋಧನಾ ಸಾಮಗ್ರಿಗಳ
ಬಗ್ಗೆ ಮಾಹಿತಿ ಪಡೆಯಬಹುದು. ಈ ಕಾರ್ಯಕ್ರಮವನ್ನು ಆದಷ್ಟೂ ಕಡಿಮೆ ವೆಚ್ಚದಲ್ಲಿ
ನಡೆಸುವ ಉದ್ದೇಶದಿಂದ ಈ ಕಾರ್ಯಕ್ರಮದಲ್ಲಿ ಕೇವಲ ಸ್ವಯಂಸೇವಕ ಅಧ್ಯಾಪಕರು
ಅದರಲ್ಲೂ ಮಕ್ಕಳ ತಂದೆ ತಾಯಿಯರನ್ನೇ ನೇಮಕಾತಿ ಮಾಡಲಾಗುವುದು. ತರಗತಿ ನಡೆಸುವ ಕೊಠಡಿಗಳನ್ನು ಅತ್ಯಂತ ಕಡಿಮೆ ದರದಲ್ಲಿ ದೊರುಕುವ ಅಥವ ಪೂರ್ಣರಿಯಾಯಿತಿ ಇರುವ ಜಾಗಗಳಲ್ಲಿ ನಡೆಸುವ ಪ್ರಯತ್ನ ನಡೆಸಬೇಕಾಗಬಹುದು. ಪ್ರತಿ
ನಗರದಲ್ಲೂ ಸಮುದಾಯ ಭವನ, ಶಾಲಾತರಗತಿಗಳು, ಚರ್ಚ್ ಹಾಲ್, ದೇವಸ್ಥಾನ
ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಈ ತರಗತಿಗಳಿಗೆ ಉತ್ತಮ ಸ್ಥಳಗಳು.
ಮನೆಗಳಲ್ಲಿ ಈ ತರಗತಿಳನ್ನು ನಡೆಸುವುದರಿಂದ ಊಟ ಉಪಚಾರಗಳು ಮಾತುಕತೆಗಳು
ಅಡ್ಡಿಬರುವುವೆಂಬ ಭೀತಿಯಿಂದ ಈ ತರಗತಿಗಳನ್ನು ನಿಗತಿತ ಸ್ಥಳಗಳಲ್ಲಿ ನಡೆಸಬೇಕೆಂದು
ಸಲಹೆ ಮಾಡಲಾಗಿದೆ.
ಮೇಲ್ಕಂಡ ಕಾರ್ಯಕ್ರಮದ ಸಂಪೂರ್ಣ ಮಾಹಿತಿಗಾಗಿ ಈ ಕೆಳಕಂಡ ಬಳಗದ
ಕಾರ್ಯಕರ್ತರನ್ನು ಅವರ ವಿದ್ಯುತ್-ಅಂಚೆ(ಇ-ಮೇಲ್)ಯ ಮೂಲಕ
ಸಂಪರ್ಕಿಸಬಹುದು.