Kannada Balaga UK
ಕನ್ನಡ ಬಳಗ ಯುಕೆ
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು
Kannada Balaga UK is the oldest Kannada organisation in United Kingdom. It began with humble roots after a handful of families decided to form a Kannada organisation in 1982. The purpose of the organisation was to get Kannadigas under one roof, to promote the rich culture and heritage of Karnataka and to expose their children to Kannada language, culture and tradition. The term “Balaga” denotes a family – an extended family encompassing all Kannadigas in the United Kingdom.
Kannada Balaga has grown from five registered families to over 800 registered families and counting; there are first, second and third generation Kannadigas actively interacting and participating in our events & activities.
This is the official website of Kannada Balaga UK. Kannada Balaga UK is a Registered Charity (Reg. Charity number 326572). The aims and objectives of the organisation are to promote kannada language, culture and heritage in UK. Kannada Balaga is not affiliated to any religious or political organisation and welcomes everybody with links to Kannada language to join us irrespective of their faith, beliefs, religion, caste or sexual orientation.
Kannada Balaga is involved with various charitable activities in UK and India through its charity wing. All members and office bearers have honorary positions and fulfill their roles on voluntary basis.
Kannada Balaga conducts two cultural events annually – Ugadi and Deepavali. Income generated through these events is spent on charitable donations.
Deepavali wishes
His Highness
Yaduveer Krishnadatta Chamaraja Wodiyar
Testimonials

Kannada has been a vehicle of regional and communal amity. Historically, the language has contributed to the growth of Indian civilisation, literature and thought. I send my good wishes to the success of the International Kannada Conference being organised by Kannada Balaga in August 1988 at Manchester.
Late Shri Rajiv Gandhi
Former Prime Minister of India

Kannadigas abroad on account of their hard work have earned considerable credit in the countries they live. I am very happy to know that the Sammelana was a great success. Please accept my congratulations and convey my best wishes to all who made it a grand success.
Late Shri Ramakrishna Hegde
Former Chief Minister of Karnataka

‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ರಾಷ್ಟ್ರಕವಿ ಕುವೆಂಪು ಅವರ ನುಡಿಗಳು ಈ ಸಂದರ್ಭದಲ್ಲಿ ನನಗೆ ನೆನಪಾಗುತ್ತಿದೆ. ಇಂಗ್ಲೆಂಡಿನಲ್ಲಿರುವ ನಮ್ಮ ಒಡಹುಟ್ಟಿದ ಅನಿವಾಸಿ ಕನ್ನಡಿಗರು ಕನ್ನಡವನ್ನು ಮರೆಯದೆ, ನೆಲೆಸಿರುವ ನಾಡಿನಲ್ಲಿ ಕನ್ನಡದ ಸಂಸ್ಕೃತಿಯ ಕಂಪನ್ನು ಹರಡಲು ಶ್ರಮಿಸುತ್ತಿರುವುದಕ್ಕೆ ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆ ಪಡಬೇಕು.
Late Dr Raj Kumar
The most famous Kannada Actor of all time

I thank the Balaga for making the Manchester event so memorable and unique! Memories linger…
Late Shri Shankar Nag
Actor, Director

ಇಂಗ್ಲೆಂಡ್ ದೇಶದ ಹಲವಾರು ರಂಗಗಳಲ್ಲಿ ಅನುಕರಣಯೋಗ್ಯ ಸೇವೆ
ಸಲ್ಲಿಸುತ್ತಿರುವ ಹೆಮ್ಮೆಯ ಕನ್ನಡಿಗರು ಬಳಗವೊಂದನ್ನು ರಚಿಸಿಕೊಂಡು ಕಳೆದ ಮೂರು ದಶಕಗಳಿಂದ
ಅನುಕರಣಯೋಗ್ಯ ಉಪಕ್ರಮಗಳೊಂದಿಗೆ ಕ್ರಿಯಾಶೀಲವಾಗಿ ಮುಂದುವರಿಯುತ್ತಿರುವುದು ಶ್ಲಾಘನೀಯ.
ಕನ್ನಡ ಬಳಗ ಯು.ಕೆ. ವತಿಯಿಂದ ಹಾಲಿ ಜರುಗುತ್ತಿರುವ 30ನೇ ವಾರ್ಷಿಕೋತ್ಸವದ ಆಚರಣೆಯ
ಎಲ್ಲಾ ಕಾರ್ಯಕ್ರಮಗಳು ಹಾಗೂ ಬಿಡುಗಡೆಯಾಗುತ್ತಿರುವ ಸ್ಮರಣಸಂಚಿಕೆ ಸಂಬ೦ಧಪಟ್ಟವರೆಲ್ಲರ ಇನ್ನೂ
ಹೆಚ್ಚಿನ ಸಬಲೀಕರಣಕ್ಕೆ ವೇದಿಕೆಗಳಾಗಲಿ ಎಂದು ಆಶಿಸುತ್ತೇನೆ. ಕನ್ನಡ ಬಳಗ ಯು. ಕೆ. ಯ ಎಲ್ಲಾ
ಚಟುವಟಿಕೆಗಳಿಗೆ ಹಾಗೂ ಪ್ರಸ್ತುತ ಸಮಾರಂಭಕ್ಕೂ ಸರ್ವರೀತಿಯಲ್ಲಿಯೂ ಶುಭ ಹಾರೈಕೆಗಳು.
Jagadish Shettar
Former Chief Minister of Karnataka

“ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು” ಎಂಬ ಕವಿವಾಣಿಯನ್ನು ಆಧರಿಸಿ ಬೆಳೆದು ತನಗೆ ೩೦ ವರ್ಷ ತುಂಬಿದ ಸಂದರ್ಭದಲ್ಲಿ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಯು.ಕೆ.
ಕನ್ನಡ ಬಳಗ ಸಂಸ್ಥೆಗೆ ಶುಭಾಶಯಗಳು ಮತ್ತು ಅಭಿನಂದನೆಗಳು. ಯು.ಕೆ. ಕನ್ನಡ ಬಳಗವು ವಿದೇಶದಲ್ಲಿ ಬೆಳೆದ ಕನ್ನಡಿಗರ ಮಕ್ಕಳಿಗೆ ಕನ್ನಡವನ್ನು ಕಲಿಸುತ್ತಿರುವ ಪ್ರಯತ್ನದಲ್ಲಿ ತೊಡಗಿರುವುದು ಅತ್ಯಂತ ಶ್ಲಾಘನೀಯವಾದ ಸಂಗತಿಯಾಗಿದೆ. ಆಂಗ್ಲಭಾಷೆ ಮತ್ತು ಸಂಸ್ಕೃತಿಯ ಬೆಸುಗೆಯಲ್ಲಿ ಬೆಳೆಯುತ್ತಿರುವ ವಿದೇಶದ ಕನ್ನಡಿಗರ ಮಕ್ಕಳಿಗೆ ತಮ್ಮ ಭಾಷೆ ಮತ್ತು ತಾಯ್ನಾಡಿನ ಬೇರುಗಳನ್ನು ಪರಿಚಯಿಸುವ ನಿಮ್ಮ ಯತ್ನ ಸಫಲವಾಗಲಿ. ಕನ್ನಡ ಭಾಷೆ, ಸಾಹಿತ್ಯ-ಸಂಸ್ಕೃತಿ ಇವುಗಳನ್ನು ಪ್ರೋತ್ಸಾಹಿಸುವ ಇಂಥ ವಾರ್ಷಿಕೋತ್ಸವ ಮತ್ತು ಸಮ್ಮೇಳನಗಳ ಸಂದರ್ಭಗಳಲ್ಲಿ ನಡೆಯುವ ವಿಚಾರ ವಿನಿಮಯದ ಮೂಲಕ ದೇಶ ಮತ್ತು ವಿದೇಶಗಳ ಕನ್ನಡಿಗರ ಸಂಬಂಧ ಮತ್ತಷ್ಟು ವೃದ್ಧಿ ಯಾಗಲಿ ಎಂದು ಹಾರೈಸುತ್ತೇನೆ.
ರಾಷ್ಟ್ರಕವಿ Late Dr G S Shivarudrappa

ಕನ್ನಡಬಳಗದ ಅಧ್ಯಕ್ಷೆ ಶ್ರೀಮತಿ ಸುರೇಣು ಜಯರಾಂ ಮತ್ತು ಬಳಗದ ಎಲ್ಲಾ ಸದಸ್ಯರುಗಳಿಗೂ
ನನ್ನ ಶುಭಾಶಯಗಳು. ಮೂವತ್ತು ವರ್ಷಗಳ ಹಿಂದೆ ಕನ್ನಡ ಬಳಗವು ಆರಂಭವಾದಾಗ ನಾನು
ಅದನ್ನು ಉದ್ಭಾಟಿಸಿದ್ದೆ. ಡಾ. ಸ್ನೇಹ ಕುಲಕರ್ಣಿಯವರು ಆ ದಿನ ಅಧ್ಯಕ್ಷೆಯರಾಗಿ
ಆಯಿಕೆಯಾದರು. ಈಗ ಬಳಗವು ತನ್ನ ಮೂವತ್ತನೆಯ ವರ್ಷವನ್ನು ಸಂಭ್ರಮದಿಂದ
ಆಚರಿಸುತ್ತಿರುವುದು ಸಂತೋಷದ ಸಂಗತಿ. ಕನ್ನಡಿಗರು ಆಗಾಗ್ಗೆ ಸೇರುವುದರ ಜೊತೆಗೆ ಕನ್ನಡ
ಪುಸ್ತಕಗಳನ್ನು ಓದುವ ಅಭ್ಯಾಸ ಇಟ್ಟುಕೊಳ್ಳುವುದು ಅಗತ್ಯ. ತಮ್ಮ ಮಕ್ಕಳಿಗೆ ಚಿಕ್ಕ
ವಯಸ್ಸಿನಿಂದಲೇ ಕನ್ನಡದಲ್ಲಿ ಮಾತನಾಡುವುದು, ಹಾಗೆಯೇ ಕನ್ನಡ ಪುಸ್ತಕಗಳನ್ನು ಓದುವುದು,
ಹಾಗು ಕನ್ನಡದಲ್ಲಿ ಕಾಗದಗಳನ್ನು ಬರೆಯುವುದು ಮೊದಲಾದವನ್ನು ಕಲಿಸಬೇಕು.
Prof S L Bhyrappa

ಆತ್ಮೀಯರೇ, ಕನ್ನಡ ಬಳಗದ ದೀಪಾವಳಯ ಕಾರ್ಯಕ್ರಮ ನಿಜಕ್ಕೂ ಅದ್ಭುತವಾಗಿ ನಡೆಯಿತು
ಎನ್ನಬಹುದು. ನಿಮ್ಮೆಲ್ಲರ ಶ್ರಮದಿಂದ ಕನ್ನಡಿಗರಿಗೆ ಅದ್ಭುತವಾದ ಕಾರ್ಯಕ್ರಮವೊಂದು
ದೊರೆತಂತಾಯಿತು. ಈ ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲ ಕನ್ನಡ ಬಾ೦ಧವರಿಗೆ ತಾಯಿ ಭುವನೇಶ್ವರಿಯ ಕೃಪೆ
ಸದಾ ದೊರೆಯಅ ಎ೦ದು ಹರಸುತ್ತೇವೆ.
Swami Japanandaji Maharaj
Vivekananda Sevashrama, Pavagada

‘ಕನ್ನಡ ಬಳಗ- ಯು.ಕೆ.’ ಹಲವಾರು ದಶಕಗಳಿಂದ ಇಂಗ್ಲೆಂಡಿನಲ್ಲಿ ಸ್ತುತ್ಯರ್ಹ ಕನ್ನಡ ಸೇವೆ ಮಾಡುತ್ತ ಬಂದಿರುವುದು ಲೋಕ ವಿದಿತ ಸಂಗತಿಯೇ ಆಗಿದೆ. ಪ್ರತಿ ದೀಪಾವಳಿ ಹಾಗೂ ಯುಗಾದಿಯ ಸಂದರ್ಭದಲ್ಲಿ ಇಂಗ್ಲೆಂಡಿನ ವಿವಿಧ ಭಾಗಗಳಲ್ಲಿ ಕನ್ನಡದ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕರ್ನಾಟಕದಿಂದ ಖ್ಯಾತ ಸಾಹಿತಿ, ಕಲಾವಿದರನ್ನು ಅತಿಥಿಗಳಾಗಿ ಆಹ್ವಾನಿಸಿ, ಗೌರವಿಸಿ, ಹೊಸ ತಲೆಮಾರಿನ ಮಕ್ಕಳಲ್ಲಿ ತಮ್ಮ ತಾಯ್ನಾಡಿಯ ಬಗ್ಗೆ ಆದರಾಭಿಮಾನಗಳನ್ನು ಉಳಿಸಿ ಬೆಳೆಸುತ್ತ ಬಂದಿರುವುದು ಹಾಗೂ ತನ್ನ ಕನ್ನಡತನ ಪಸೆಯಾರದಂತೆ ಈವರೆಗೂ ಕಾಪಾಡಿಕೊಂಡು ಬಂದಿರುವುದು ಈ ಸಂಸ್ಥೆಯ ಹೆಗ್ಗಳಿಕೆ. ನಾನೂ ಸಹ ಕೆಲವು ವರ್ಷಗಳ ಹಿಂದೆ ಈ ಸಂಸ್ಥೆಯ ಅತಿಥಿಯಾಗಿ ಬಂದು ಅದರ ಆದರಾತಿಥ್ಯಗಳ ಅವಿಸ್ಮರಣೀಯ ಸವಿಯನ್ನು ಉಂಡಿದ್ದೇನೆ. ಇದೀಗ ಈ ಸಂಸ್ಥೆ ತನ್ನದೇ ಒಂದು ಅಂತರ್ಜಾಲ ತಾಣವನ್ನು ಹೊಂದುತ್ತಿರುವುದು ಸಂತೋಷದ, ಸ್ವಾಗತಾರ್ಹವಾದ ಸಂಗತಿ. ‘ಕನ್ನಡ ಬಳಗ- ಯು.ಕೆ.’ಗೆ ನನ್ನ ಹಾರ್ದಿಕ ಅಭಿನಂದನೆಗಳು.
– ಬಿ.ಆರ್.ಲಕ್ಷ್ಮಣರಾವ್